Saturday, February 06, 2010

Kannada Pustaka



ಹೀಗೊಂದು ಬ್ಲಾಗ್ ಇದೆ. ಇದರಲ್ಲಿ ಶ್ರೀಯುತ ಡಾ. ಜೆ. ಬಾಲಕೃಷ್ಣ ರವರು ತಮ್ಮ ಕೃತಿಗಳನ್ನು ಉಚಿತವಾಗಿ download ಮಾಡಿಕೊಳ್ಳಲು ಅವಕಾಶವನ್ನಿತ್ತಿದ್ದಾರೆ. ಇವರ ಪುಸ್ತಕಗಳು ಆಸಕ್ತಿ ಕೆರೆಳಿಸುವಂತಿದೆ.

http://kannadapustaka.blogspot.com/

Just ಮಾತ್ ಮಾತಲ್ಲಿ


Just ಮಾತ್ ಮಾತಲ್ಲಿTechnically ತುಂಬಾ brilliant ಆಗಿದೆ.
ಹಾಡುಗಳು ಪ್ಲಸ್ ಪಾಯಿಂಟ್.
Re-recording ಅದ್ಭತವಾಗಿ ಮೂಡಿ ಬಂದಿದೆ.
ರಾಮ್ ಗೋಪಾಲ್ ವರ್ಮ Factory ಇಂದ ತುಂಬಾ ಕಲಿತಿದ್ದಾರೆ ನಿರ್ದೇಶಕರು.
Camera angles; ನೆರಳು-ಬೆಳಕಿನ ಸಂಯೋಜನೆ apt ಆಗಿದೆ.
ಸಿನೆಮಾ ಶುರುವಿನಲ್ಲಿ ರಾಜೇಶ್(ಆದಿ) ತುಂಬಾ ಕಾಟ ಕೊಡ್ತಾರೆ. ಅದು ನಿರ್ದೇಶಕರ ಗೆಲವು.
ಚಿತ್ರದ Marketing ನವ-ನವೀನ.
ಚಿತ್ರದ heroಗಳು ಅಂದರೆ-  ನಿರ್ದೇಶಕ
                             ನಾಯಕ ಸಿದ್ಧಾರ್ಥ್
                             ರಘು ದೀಕ್ಷಿತ್(ಸಂಗೀತ)
                             ಶ್ರೀವೆಂಕಟ್(ಛಾಯಾಗ್ರಹಣ)
                             ರೋಹಿತ್(ಚಿತ್ರಕತೆ-ಸಂಭಾಷಣೆ)
                             ಅರುಣ್ ಸಾಗರ್(ಕಲೆ)
ತೀರಾ simple ಕಥೆಯನ್ನು ನಿರ್ದೇಶಕರು ಅದ್ಭುತವಾಗಿ present ಮಾಡಿದ್ದಾರೆ.
ಇದು ನಮ್ಮ ನಡುವೆಯೇ ನಡೆಯುವ ಕಥೆ. ನಾಯಕ ಸಿದ್ಧಾರ್ಥ್ ಜೊತೆ ನಾವು ನಮ್ಮನ್ನ identify ಮಾಡ್ಕೋತೀವಿ.
ಪಟ್-ಪಟ್ ಅಂತ ಅರಳು ಹುರಿದಂತೆ ಮಾತಾಡುವ ನಾಯಕಿ ತನು ಇಷ್ಟವಾಗ್ತಾಳೆ.
ಕೆಲವೊಂದು ಕಡೆ melodrama ಅಂತ ಅನ್ನಿಸಿದರೂ, no complaints.
Just ಮಾತ್ ಮಾತಲ್ಲಿ ಎಲ್ಲಾ ಹೇಳಲಾಗದು. ಕೆಲವೊಂದು ಭಾವನೆಗಳಿಗೆ ಮಾತಿಲ್ಲ. ಮೌನವೇ ಸೂಕ್ತ. ಇದನ್ನು ಅತ್ಯಂತ ಶ್ರದ್ಧೆಯಿಂದ ಬಹಳ ತೀವ್ರವಾಗಿ ತೆರೆ ಮೇಲೆ ತಂದಿದ್ದಾರೆ ನಿರ್ದೇಶಕರು.
ರಘು ದೀಕ್ಷಿತ್ ಮತ್ತೊಮ್ಮೆ ಮಿಂಚಿದ್ದಾರೆ. ಹಾಡುಗಳು, re-recording ನವ್ಯ. ಹಾಡಿನ ಸಾಹಿತ್ಯದಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ.
ಈ ಚಿತ್ರದ ಸಂಗೀತದ ಬಗ್ಗೆ ಅವಶ್ಯವಾಗಿ ಹೇಳಲೇಬೇಕಾದ ಮುಖ್ಯವಾದ ಸಂಗತಿ ಅಂದ್ರೆ ಈ ಚಿತ್ರದಲ್ಲಿ ಕನ್ನಡದ ಗಾಯಕರು ದನಿ ನೀಡಿದ್ದಾರೆ. ಕನ್ನಡ ಚಿತ್ರ ಗೀತೆಗಳು ಸೋನು ನಿಗಮ್ ರ ಅಸ್ಪಷ್ಟ ಉಚ್ಚಾರದಿಂದ ಅಸಹ್ಯ ಹುಟ್ಟಿಸುವಷ್ಟು ಬಾಡಿ ಹೋಗಿತ್ತು.
Just ಮಾತ್ ಮಾತಲ್ಲಿ ಗೀತ ಸಾಹಿತ್ಯ-ಸಂಗೀತ ಹೊಸದೊಂದು ಅಲೆ ಸೃಷ್ಠಿಸಿದೆ ಅಂದರೆ ತಪ್ಪಾಗಲಾರದು. ಶ್ರೀಯುತ ಹಂಸಲೇಖಾ ಹೇಳುವಂತೆ ರಘು ದೀಕ್ಷಿತ್ trend-setter. ಎಲ್ಲಾ ಹಾಡುಗಳು ಅದ್ಭುತ ಸೃಷ್ಠಿ. ಅದರಲ್ಲೂ ಮುಂಜಾನೆ ಮಂಜಲ್ಲೂ ಹಾಡು ಎದೆಯ ನವಿರಾದ ಭಾವನೆಗಳನ್ನು-ಹಳೆಯ ಪ್ರೇಮದ ನೆನಪುಗಳನ್ನು ನೆನಪಿಸುತ್ತೆ- ಹೀಗೆ just ಮಾತ್ ಮಾತಲ್ಲಿ……..

ಈ ಚಿತ್ರ ಖಚಿತವಾಗಿ ಎಲ್ಲಾರಿಗೂ ಇಷ್ಟವಾಗಲಾರದು. ಸುದೀಪ್ ಅಭಿಮಾನಿಗಳಿಗೆ ನಿರಾಶೆ ಆಗಬಹುದು.
ಆದರೆ, at the end of the day, ಸುದೀಪ್ ನಿರ್ದೇಶಕನಾಗಿ ಗೆಲ್ತಾರೆ. ನಟನಾಗಿ ಗೆಲ್ತಾರೆ. ಚಿತ್ರಕತೆಯಲ್ಲಿ ಗೆಲ್ತಾರೆ. ಪ್ರತಿಯೊಂದು frame ಅನ್ನು ತುಂಬಾ ಇಷ್ಟಪಟ್ಟು ಮಾಡಿದ್ದಾರೆ.

Tuesday, February 02, 2010

ಪುಟ್ಟಕ್ಕನ ಮೆಡಿಕಲ್ ಕಾಲೇಜು


ಈ ಕಥೆ ಸುಮಾರು ಎರಡು ದಶಕಗಳಷ್ಟು ಹಳೆಯದು. ಹಿಂದಿಗಿಂತ ಇಂದು ಹೆಚ್ಚು ಪ್ರಸ್ತುತ. ಲೇಖಕರೇ ಹೇಳುವಂತೆ ಕಥೆ 
ಕಾಲಾತೀತವಾಗಿರಬೇಕು. ಹಾಗಿದ್ದರೆ ಅವು ಚಿರಾಯು.

ಇವತ್ತಿನ ಸಮಾಜದ ನಿಜ ಸ್ವರೂಪ ಈ ಕಥೆಯಲ್ಲಿ ಚಿತ್ರಿತವಾಗಿದೆ. ಇಂದು ರೈತ ಅತಂತ್ರವಾಗಿದ್ದಾನೆ. ಆತ ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆ. ಕಷ್ಟ ಪಟ್ಟು ದುಡಿದು ಅದರ ಫಲ ತಿಂದುಂಡು ಸುಖವಾಗಿರುವ ಮನಃಸ್ಥಿತಿಯಲ್ಲಿ ಇವತ್ತು ರೈತನಿಲ್ಲ. ಆತನಿಗೆ ತನ್ನ ಜಮೀನು ಮಾರುವ ಉಮೇದು. ಸರಿಯಾದ ಬೆಲೆ ಸಿಗದೆ ಅದನ್ನು ಬಿಸಾಡುವ ಬದಲು ತನ್ನ ಜಮೀನನ್ನು ಮಾರಿ ಅದರಿಂದ ಬರುವ “ಖಚಿತ ಧನ”ಕ್ಕಾಗಿ ಆಸೆ ಪಡ್ತಾನೆ. ಚಿನ್ನದ ಮೊಟ್ಟೆ ಇಡುವ ಕೋಳಿ ಕಥೆಯಂತೆ. ರೈತ ತನ್ನ ಬೆಳೆಗೆ ತಕ್ಕ ಬೆಲೆ ನಿಗದಿ ಪಡಿಸೋದಿಲ್ಲ. ಇದನ್ನು ಮಧ್ಯವರ್ತಿಗಳು ಅದ್ಭುತವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ.  ಇದೇ ಆಶಯವನ್ನಿಟ್ಟುಕೊಂಡು ಲೇಖಕರು ತಮ್ಮ ಚಿತ್ರ “ಮಾತಾಡ್ ಮಾತಾಡು ಮಲ್ಲಿಗೆ” ಯಲ್ಲಿ ತೆರೆಗೆ ತಂದಿದ್ದಾರೆ.

ಈ ಕಥೆಯಲ್ಲಿ ನಮ್ಮ ಕಥಾನಾಯಕಿ ಪುಟ್ಟಕ್ಕ ಅಸಾಹಯಕ ಹೆಣ್ಣು(ರೈತ). ಆಕೆಗೊಂದಿಷ್ಟು ಜಮೀನಿದೆ. ಅದೂ ಹೈವೆ ರಸ್ತೆಯ ಬಳಿ.ಇಲ್ಲಿ ಪುಟ್ಟಕ್ಕ ಶೋಷಿತ ಮಹಿಳೆಯರ ಪ್ರತಿನಿಧಿಯಂತೆ ಕಾಣುತ್ತಾಳೆ. ಅದೇ ಪಾತ್ರಕ್ಕೆ ಪುರುಷ ಆಯಾಮ ಹಚ್ಚಿ ……….ಮಲ್ಲಿಗೆಯಾಗಿಸಿದ್ದಾರೆ ಲೇಖಕರು.

ಆಕೆಯ ಜಮೀನನ್ನು ಕಬಳಿಸಿ ಅಲ್ಲೊಂದು ಮೆಡಿಕಲ್ ಕಾಲೇಜು ಕಟ್ಟುವ ಮಹತ್ವಾಕಾಂಕ್ಷಿ ಅಲ್ಲಿಯ ಸ್ವಾಮಿಗಳದು. ಸ್ವಾಮಿಗಳು-ಮಠಗಳು ದೇವರ-ಜಾತಿಯ ಹೆಸರಲ್ಲಿ ಮಾಡುತ್ತಿರುವ-ಮಾಡುವ ಅನ್ಯಾಯ ಅಕ್ರಮಗಳು ಕಾಲಾತೀತ. ತನ್ನ ಜಮೀನನ್ನು ಉಳಿಸಿಕೊಳ್ಳಲು ಪಡಬಾರದ ಪಾಡು ಪಡುವ ಅನಕ್ಷರಸ್ಥೆ ಪುಟ್ಟಕ್ಕ ಕೊನೆಗೂ ವಿಫಲಳಾಗುತ್ತಾಳೆ. ಅವಳ ಜಮೀನನ್ನು ಕಬ್ಜಾ ಮಾಡಿ ಅಲ್ಲೊಂದು “ಕಟ್ಟಡ” ನಿರ್ಮಿಸಿ ಅದಕ್ಕೆ “ಕಾಲೇಜು” ಎಂದು ನಾಮಕರಣ ಮಾಡುಲು ಘನ ಮುಖ್ಯಮಂತ್ರಿಗಳನ್ನು ನಮ್ಮ ಸ್ವಾಮೀಜಿ ಆಹ್ವಾನಿಸುತ್ತಾರೆ.

ಇವತ್ತಿನ ವಾಸ್ತವಕ್ಕೆ ಕನ್ನಡಿಯಾಗಿ ಈ ಕತೆ ನಿಲ್ಲುತ್ತದೆ. ಎಲ್ಲಾ ಕಾಲಕ್ಕೂ ಸಲ್ಲುವಂತ ಕಥೆಯಾಗಿ ಹೊರ ಹೊಮ್ಮುತ್ತದೆ.
ಈ ಕಥೆ “ಸನ್ನಿಧಿ” ಕಥಾ ಸಂಕಲನದ್ದು. ಅದು ಅಭಿವ್ಯಕ್ತಿಯ ಮೂಲಕ ಮತ್ತೊಮ್ಮೆ ಪ್ರಕಟವಾಗಿದೆ.

ಪ್ರಥಮ ಮುದ್ರಣ:1990
ಮತ್ತೆ ಪ್ರಕಾಶಿಸಿದ್ದು:2009
ಲೇಖಕರು: ನಾಗತಿಹಳ್ಳಿ ಚಂದ್ರಶೇಖರ